ಬೆಂಗಳೂರು, ಜ.೧೭: ಕರ್ನಾಟಕ ಕೋಮು ಸೌಹಾದ ಹಾಗೂ ಶಾಂತಿಗೆ ಹೆಸರಾಗಿದೆ. ಇದನ್ನು ಎಲ್ಲ ಸಮುದಾಯಗಳು ಉಳಿಸಿಕೊಂಡು ಹೋಗಬೇಕು ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕರೆ ನೀಡಿದ್ದಾರೆ.
ದಿ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ‘ಬ್ಯಾರಿ ವಾರ್ಷಿಕ ಕೂಟ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ಕರ್ನಾಟಕದಲ್ಲಿ ಕೆಲವು ದುಷ್ಟ ಶಕ್ತಿಗಳು ಕೋಮುಸೌಹಾರ್ದ ಹಾಗೂ ಶಾಂತಿಗೆ ಧಕ್ಕೆ ತರುವಂತಹ ಕಾರ್ಯದಲ್ಲಿ ತೊಡಗಿವೆ. ಇದು ಹೆಚ್ಚಾಗಿ ದಕ್ಷಿಣ ಕನ್ನಡದ ಮಂಗ ಳೂರು, ಉಡುಪಿ ಮುಂತಾದ ಜಿಲ್ಲೆ ಗಳಲ್ಲಿ ನಡೆಯುತ್ತಿದ್ದು, ಆ ಭಾಗದ ಜನತೆ ಬಿಗುವಿನ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈಗಲಾ ದರೂ ಎಲ್ಲ ಸಮುದಾಯದವರು ಎಚ್ಚೆತ್ತುಕೊಂಡು ದುಷ್ಟ ಶಕ್ತಿಗಳ ಅಟ್ಟಹಾಸಕ್ಕೆ ಆಸ್ಪದ ನೀಡದಂತೆ ಒಗ್ಗಟ್ಟಾಗಬೇಕಾಗಿದೆ ಎಂದು ಭಾರದ್ವಾಜ್ ಸಲಹೆ ನೀಡಿದರು.
ಮುಸ್ಲಿಂ ಸಮುದಾಯದ ಧರ್ಮ ಗ್ರಂಥವಾದ ಕುರ್‌ಆನ್‌ನಲ್ಲಿ ಸಮಾನತೆ ಹಾಗೂ ದಯೆಗೆ ಹೆಚ್ಚಿನ ಆದ್ಯತೆ ನೀಡ ಲಾಗಿದೆ. ಈ ಧರ್ಮಗ್ರಂಥದಿಂದಲೇ ಸಂವಿಧಾನದ ೧೪ನೆ ಕಲಮಿನಲ್ಲಿನ ಸಮಾನತೆಯ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತು ಎಂದರೆ ತಪ್ಪಾಗಲಾರದು ಎಂದು ಅವರು ಅಭಿಪ್ರಾಯಪಟ್ಟರು.



೧೮ ಶತಮಾನದಲ್ಲಿ ಮರ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದ ಬಪ್ಪಾ ಬ್ಯಾರಿ ಬಪ್ಪನಾಡು, ದುರ್ಗಾ ಪರಮೇಶ್ವರಿ ದೇವಾಲಯವನ್ನು ಮುಲ್ಕಿ ಯಲ್ಲಿ ನಿರ್ಮಾಣ ಮಾಡಿದ. ಬ್ರಿಟಿಷರ ವಿರುದ್ಧ ಹೋರಾಡಿದ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯವರ ಸೈನ್ಯದಲ್ಲಿ ಬ್ಯಾರಿಗಳಿದ್ದರು. ಅಲ್ಲದೆ, ಸ್ವಾತಂತ್ರ ಹೋರಾಟದಲ್ಲಿ ಬ್ಯಾರಿ ಸಮುದಾಯದ ಹಲವು ಮುಖಂಡರು ಪಾಲ್ಗೊಂಡಿದ್ದರು ಎಂದು ಅವರು ನುಡಿದರು.ಸಮಾರಂಭದಲ್ಲಿ ಬ್ಯಾರಿ ಸಮು ದಾಯದಿಂದ ಜೀವಮಾನದ ಸಾಧನೆ ಗಾಗಿ ಸನ್ಮಾನಿತರಾದ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊದಿನ್‌ರ ಕುರಿತು ಮಾತನಾಡಿದ ಸಂಸದ ಡಿ.ಬಿ. ಚಂದ್ರೇಗೌಡ, ಗೆಳೆತನಕ್ಕೆ ಮತ್ತೊಂದು ಹೆಸರು ಮೊದಿನ್ ಆಗಿದ್ದಾರೆ ಎಂದು ಹೇಳಿದರು. ಗೆಳೆತನಕ್ಕೆ ಅಪಾರ ಗೌರವ ನೀಡುವ ಅವರೊಂದಿಗೆ ಹಿಂದಿ ನಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಮಾಣಿಕರನ್ನು ಹುಡುಕಬೇಕಾದ ಈ ಸಂದರ್ಭದಲ್ಲಿ ಮೊದೀನ್‌ರಂತಹ ಕೆಲವರು ಅಲ್ಲಲ್ಲಿ ಸಿಗುತ್ತಾರೆ ಎಂದು ನುಡಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಬ್ಯಾರಿ ಸಮುದಾಯ ಮುಂದುವರಿಯುತ್ತಿರು ವುದು ಸಂತಸದ ವಿಷಯ ಎಂದು ಅವರು ಹೇಳಿದರು.
ಜೀವಮಾನದ ಸಾಧನೆಗಾಗಿ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊದಿನ್ ರವರಿಗೆ ದಿ ಬ್ಯಾರಿಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.